Monday, December 1, 2025
Google search engine
Homeಸಿನಿ ಸಮಾಚಾರಬೇಗೂರು ಕಾಲೋನಿಗೆ 'ಭೀಮ' ಬಲ..

ಬೇಗೂರು ಕಾಲೋನಿಗೆ ‘ಭೀಮ’ ಬಲ..

ಬೇಗೂರು ಕಾಲೋನಿಗೆ ‘ಭೀಮ’ ಬಲ.. ರಾಜೀವ್ ಸಿನಿಮಾಗೆ ಸಾಥ್ ಕೊಟ್ಟ ದುನಿಯಾ ವಿಜಯ್ ಕುಮಾರ್ ಕ್ಯಾರೆಕ್ಟರ್ ಮೋಷನ್ ಪೋಸ್ಟರ್ ನಲ್ಲಿ ‘ಬೇಗೂರು ಕಾಲೋನಿ’..ರಾಜೀವ್ ಹನು ಚಿತ್ರಕ್ಕೆ ಭೀಮ ಬೆಂಬಲ

ಕನ್ನಡ ಚಿತ್ರರಂಗಕ್ಕೆ ಬಲ ತುಂಬಿರುವ ಭೀಮ ಹೊಸಬರಿಗೆ ಸದಾ ಬೆಂಬಲವಾಗಿ ನಿಲ್ತಾನೆ ಇರ್ತಾರೆ. ದುನಿಯಾ ವಿಜಯ್ ಕುಮಾರ್ ಬಿಗ್ ಬಾಸ್ ಖ್ಯಾತಿಯ ರಾಜೀವ್ ಹನು ಹೊಸ ಸಿನಿಮಾಗೆ ಸಾಥ್ ಕೊಟ್ಟಿದ್ದಾರೆ.  ಫ್ಲೈಯಿಂಗ್ ಕಿಂಗ್ ಮಂಜು ಕಥೆ ಬರೆದು ನಿರ್ದೇಶಿಸಿರುವ ‘ಬೇಗೂರು ಕಾಲೋನಿ’ ಚಿತ್ರದ ಕ್ಯಾರೆಕ್ಟರ್ ಮೋಶನ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಮೋಷನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಂ ಎನ್ ಸುರೇಶ್ , ಖ್ಯಾತ ಸಂಭಾಷಣೆಗಾರ ಮಾಸ್ತಿ ಸೇರಿದಂತೆ ಮತ್ತಿತರರು ಕಾರ್ಯಕ್ರಮಕ್ಕೆ ಮೆರಗು ನೀಡಿದರು.

ಈ ವೇಳೆ ನಟ ಕಂ ನಿರ್ಮಾಪಕ ವಿಜಯ್ ಕುಮಾರ್ ಮಾತನಾಡಿ,  ನಿರ್ಮಾಪಕರು ನಮ್ಮ ಊರಿನ ಕಡೆಯವರು. ನಮ್ಮದು ಅಂತಾ ಸೆಳೆಯುತ್ತದೆ. ನಿರ್ಮಾಪಕ ಹಾಗೂ ನಿರ್ದೇಶಕ ಮಂಜು ಅವರಿಗೆ ಒಳ್ಳೆದಾಗಲಿದೆ. ಮಂಜು ಗೌರವ ಕೊಡ್ತೀಯಾ ಎನ್ನುವುದಕ್ಕಿಂತ. ಹೋರಾಟದ ಶಕ್ತಿ ಕಾಡ್ತಿದೆ. ನ್ಯಾಯಾ ಕೇಳಲಿ ಎಲ್ಲಿ ಕೇಳಲಿ, ಜಾತಿ ಭೇದ ಮತ ನೊಂದವರಿಗಾಗಿ ಆದ ಅನ್ಯಾಯ ಎಂದು ಎದೆ ತಟ್ಟಿಕೊಂಡು ನಿಲ್ಲವರು ಎಂದುಕೊಂಡಿದ್ದೇನೆ. ಮಂಜು ಅವರಲ್ಲಿ ಇದನ್ನು ಕಂಡೆ.  ಹೋರಾಟ ಇಟ್ಕೊಂಡು ಮಾಡಿರುವ ಕಥೆ ಬೇಗೂರು ಕಾಲೋನಿ ಎನಿಸುತ್ತದೆ, ಈ ಹೋರಾಟದ ಕಥೆ ಸರ್ಕಾರಕ್ಕೆ ಮುಟ್ಟಲಿ,. ಕಾಲೋನಿ ಇಲ್ಲದೇ ನಗರ ಆಗಲ್ಲ. ಕಾಲೋನಿ ಶಕ್ತಿ ಶಕ್ತಿಯೇ. ಮಾಲ್ ನಗರ ಆಗುವುದು ಕಾಲೋನಿಯಿಂದ, ಕಾಲೋನಿಯವರು ಕಾಲಿಗೆ ಸಮ ಅಲ್ಲ. ಅವರಿಂದನೇ ಎಲ್ಲಾ. ಕಾಲೋನಿಯವರು ಮೊದಲು ಸಿನಿಮಾ ನೋಡಿ ಆಮೇಲೆ ಮಾಲ್ ನವರು ಬಂದು ನೋಡ್ತಾರೆ. ರಾಜೀವ್ ಕ್ರಿಕೆಟ್ ಆಡುವುದು ನಟನೆಯಲ್ಲಿ ಪೋರ್ಸ್ ಇದೆ. ಆದರೆ ಕರೆಕ್ಟ್ ಟೈಮ್ ನಲ್ಲಿ ಬರ್ತಿಲ್ಲ. ರಾಜೀವ್ ಹಾರ್ಡ್ ವರ್ಕರ್. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದರು.

ನಿರ್ದೇಶಕ ಫ್ಲೈಯಿಂಗ್ ಮಂಜು ಮಾತನಾಡಿ, ಕಾಲೋನಿ ಸೊಸೈಟಿ, ಎಲ್ಲಾ ರೀತಿ ಜನ ವಾಸ ಮಾಡ್ತಾರೆ. ಅಲ್ಲಿ ನಡೆಯುವ ಒಂದು ಸಣ್ಣ ಕಥೆ ಕಾಲೋನಿ. ಇದು ಹೋರಾಟದ ಕಥೆ. ಇದರಲ್ಲಿ ಫೈಟ್ಸ್ ಚೆನ್ನಾಗಿ ಮಾಡಿದ್ದರೆ ಆ ಕ್ರೆಡಿಟ್ ವಿಜಯ್ ಅಣ್ಣನಿಗೆ ಹೋಗಲಿ. ನನ್ನ ಸಣ್ಣ ನಿರ್ದೇಶಕನಿಗೆ ವಿಜಯ್ ಅಣ್ಣ ಸಾಥ್ ಕೊಟ್ಟಿದ್ದು ನಾನು ಎಂದಿಗೂ ಮೆರಯುವುದಿಲ್ಲ ಎಂದರು.

ನಟ ರಾಜೀವ್ ಹನು ಮಾತನಾಡಿ, ಫ್ಲೈಕಿಂಗ್ ಮಂಜು ನನಗೆ ಸತತ 15 ವರ್ಷಗಳ ಪರಿಚಯ. ಅವತ್ತಿನಿಂದ ಮಂಜು ಪರಿಚಯ. ತನಗೆ ಏನು ಬೇಡ. ಹೊಟ್ಟೆ ತುಂಬಿದರೆ ಸಾಕು ಎಂದು ಕೆಲಸ ಮಾಡುವ ವ್ಯಕ್ತಿ,. ಆ ಕೆಲಸ ಪರದೆಯ ಮೇಲೆ ಕಾಣುತ್ತಿದೆ. ಇವತ್ತು ಇಷ್ಟು ಜನ ಒಟ್ಟುಗೂಡಿಸುವ ಕೆಲಸ ಕೂಡ ಅವರದ್ದು ಹಾಗೂ ನಿರ್ಮಾಪಕರದ್ದು. ರಾಜೀವ್ ರಾಘವನಾಗಿ ನಿಂತುಕೊಳ್ತಾನೆ ಎಂಬ ನಂಬಿಕೆ ಇದೆ ಎಂದರು.

ಆನಂದ್ ಅಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬೇಗೂರು ಕಾಲೋನಿ ಕ್ಯಾರೆಕ್ಟರ್ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಬರುವ ಎಲ್ಲಾ ಪಾತ್ರಧಾರಿಗಳನ್ನು ಈ ವಿಡಿಯೋದಲ್ಲಿ ಪರಿಚಯಿಸಲಾಗಿದ್ದು, ಇನ್ನೇನು ಶೀಘ್ರದಲ್ಲೇ ಚಿತ್ರತಂಡ ಟೀಸರ್ ರಿಲೀಸ್ ಮಾಡುವ ನಿರೀಕ್ಷೆಯಲ್ಲಿದೆ.

ಈ ಚಿತ್ರವನ್ನು ಶ್ರೀಮಾ ಸಿನಿಮಾಸ್ ಬ್ಯಾನರ್ ನಲ್ಲಿ ಎಂ ಶ್ರೀನಿವಾಸ್ ಬಾಬು ನಿರ್ಮಾಣ ಮಾಡಿದ್ದು, ರಾಜೀವ್ ಹನು ಸೇರಿದಂತೆ ಫೈಯಿಂಗ್ ಕಿಂಗ್ ಮಂಜು, ಪಲ್ಲವಿ ಹರ್ವ, ಕೀರ್ತಿ ಭಂಡಾರಿ, ಪೋಸಾಗ್ನಿ ಕೃಷ್ಣ ಮುರಳಿ, ಬಾಲ ರಾಜವಾಡಿ ಬಣ್ಣ ಹಚ್ಚಿದ್ದಾರೆ. ವಿಜಯ್ ಸೋವರ್ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದು, ಪ್ರಮೋದ್ ತಳವಾರ್ ಸಂಕಲನ, ಹಾಗೂ ಕಾರ್ತಿಕ್ ಛಾಯಾಗ್ರಹಣ, ಅಭಿನಂದನ್ ಕಶ್ಯಪ್ ಸಂಗೀತ ಚಿತ್ರಕ್ಕಿದೆ.

RELATED ARTICLES
- Advertisment -
Google search engine

Most Popular

Recent Comments

Swarupa Sandarshan - WordPress Downloads -
Deneme Bonusu Veren Siteler +750 TL Ekim 2025 - Güvenilir bahis siteleri Ekim 2025 - En Popüler Slot Oyunları Ekim 2025: Guns N’ Roses oyunu
Casino Sites October 2025: Trusted Online Casino - Betting Sites October 2025: Trusted Live Betting - Top Slot Games October 2025: Guns N’ Roses play