Monday, November 25, 2024
Google search engine
Homeಸಿನಿ ಸಮಾಚಾರ'ಸ್ವರಾಜ್ಯ 1942' ಚಿತ್ರದ ಟೀಸರ್ ರಿಲೀಸ್..

‘ಸ್ವರಾಜ್ಯ 1942’ ಚಿತ್ರದ ಟೀಸರ್ ರಿಲೀಸ್..

‘ಸ್ವರಾಜ್ಯ 1942’ ಚಿತ್ರದ ಟೀಸರ್ ರಿಲೀಸ್..

ಕಮರ್ಷಿಯಲ್ ಸಿನಿಮಾಗಳ ಭರಾಟೆ ನಡುವೆ ಕನ್ನಡದಲ್ಲೊಂದು ಕ್ರಾಂತಿಕಾರಿ ಸಿನಿಮಾ ತಯಾರಾಗಿದೆ. ಅದುವೇ ‘ಸ್ವರಾಜ್ಯ 1942’. 4ನೇ ತರಗತಿಯ ಪಠ್ಯ ಪುಸ್ತಕದಲ್ಲಿರುವ ಹುತಾತ್ಮ ಬಾಲಕ ಕಥೆ ಈಗ ಸಿನಿಮಾವಾಗಿದೆ. ಈ ಹಿಂದೆ ಹತ್ಯೆ ಸಿನಿಮಾ ನಿರ್ದೇಶಿಸಿದ್ದ ವರುಣ್ ಗಂಗಾಧರ್ ‘ಸ್ವರಾಜ್ಯ 1942’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗಷ್ಟೇ ಬೆಂಗಳೂರಿನ ರೇಣುಕಾಂಬ ಸ್ಟುಡಿಯೋ ನಡೆಯಿತು. ಈ ವೇಳೆ ಇಡೀ ತಂಡ ಭಾಗಿಯಾಗಿತ್ತು.
ಟೀಸರ್ ಬಿಡುಗಡೆ ಬಳಿಕ ನಿರ್ದೇಶಕ ವರುಣ್ ಗಂಗಾಧರ್ ಮಾತನಾಡಿ, ನಾನು ಈ ಹಿಂದೆ ಹತ್ಯೆ ಎಂಬ ಸಿನಿಮಾ ಮಾಡಿದ್ದೆ. ಆ ಚಿತ್ರದಲ್ಲಿ ಮಗ ಸಣ್ಣ ಪಾತ್ರ ಮಾಡಿದ್ದ. ಸ್ವರಾಜ್ಯ ನಾನೇ ಎಲ್ಲವನ್ನೂ ಹ್ಯಾಂಡಲ್ ಮಾಡಿದ್ದೇನೆ. ಸಿನಿಮಾ ಮಡುವುದು ಬಹಳ ಸುಲಭ ಅನಿಸಿತು. 1942ರಲ್ಲಿಯೇ ಹುಬ್ಬಳ್ಳಿಯ ಹುಡುಗ ಸ್ವಾತಂತ್ರ್ಯ ಹೋರಾಟಗಾರನಾಗಿ ಎಂಬುದನ್ನು ಜಗತ್ತಿಗೆ ಪರಿಚಯಿಸಲು ಈ ಚಿತ್ರ ಮಾಡಿದ್ದೇನೆ. ಶಾಲೆಯ ಪಠ್ಯ ಪುಸ್ತಕವನ್ನು ಸಿನಿಮಾ ರೂಪಕ್ಕೆ ತಂದಿದ್ದೇನೆ. ಶಾಲಾ ಮಕ್ಕಳಿಗೂ ಈ ಚಿತ್ರ ತೋರಿಸುವ ಐಡಿಯಾ ಇದೆ ಎಂದರು.

ಹುಬ್ಬಳ್ಳಿ ಮೂಲದ ಬಾಲಕನೊಬ್ಬ ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದ ಕ್ವೀಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಲು ಹೊರಟಾಗ ಬ್ರಿಟಿಷರ ಗುಂಡೆಂಟಿಗೆ ಹುತಾತ್ಮನಾದ ಕಥೆಯೇ ‘ಸ್ವರಾಜ್ಯ 1942’.  14ನೇ ವಯಸ್ಸಿನಲ್ಲಿ ದೇಶಕ್ಕಾಗಿ ಹೋರಾಡುವ ಉತ್ಸಾಹ ತೋರಿದ ಆ ಹುತಾತ್ಮರ ಮಾಹಿತಿ ಕಲೆ ಹಾಕಿ ಕುಟುಂಬದವರ ಒಪ್ಪಿಗೆ ಮೇರೆಗೆ ಸಿನಿಮಾ ಮಾಡಲಾಗಿದೆ. ನಿರ್ದೇಶಕ ವರುಣ್ ಗಂಗಾಧರ್ ಈ ಚಿತ್ರದ ಮೂಲಕ ತಮ್ಮ ಮಗನನ್ನು ಇಂಡಸ್ಟ್ರೀಗೆ ಪರಿಚಯಿಸಿದ್ದಾರೆ.

ಮಾಸ್ಟರ್ ವರುಣ್ ಜಿ, ಯಶ್ ರಾಜ್ ಕಾರಜೋಳ್, ಓಂ ಕಾರಜೋಳ್, ಆದ್ಯ ಕಾರಜೋಳ್, ವೀಣಾ ಸುಂದರ್, ನಾಗೇಶ್ ಮಯ್ಯ, ಮೂಗು ಸುರೇಶ್, ಸಚಿನ್ ಪುರೋಹಿತ್, ಜಾನಿ ಚಿತ್ರದಲ್ಲಿ ನಟಿಸಿದ್ದಾರೆ. ಅಲೆನ್ ಕ್ರಾಸ್ಟಾ ಸಂಗೀತ ನಿರ್ದೇಶನ, ಸೂರ್ಯಕಾಂತ್ ಛಾಯಾಗ್ರಹಣ, ಸಂಜೀವ್ ರೆಡ್ಡಿ ಸಂಕಲನ ‘ಸ್ವರಾಜ್ಯ 1942’ ಸಿನಿಮಾಗಿದೆ. ವಿವೈ ಸಿನಿಮಾಸ್ ಬ್ಯಾನರ್ ನಡಿ ಡಾ.ಪುಷ್ಪಾವತಿ ಮತ್ತು ಏ ಕಾರಜೋಳ ಶಕುಂತಲಾ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಶೂಟಿಂಗ್ ಮುಗಿಸಿರುವ ‘ಸ್ವರಾಜ್ಯ 1942’ ಆದಷ್ಟು ಬೇಗ ಪ್ರೇಕ್ಷಕರ ಮುಂದೆ ಬರಲಿದೆ.

RELATED ARTICLES
- Advertisment -
Google search engine

Most Popular

Recent Comments