Friday, November 22, 2024
Google search engine
Homeಸಿನಿ ಸಮಾಚಾರಭಾರತದ ಮೊದಲ ಮಹಿಳಾ ಸೂಪರ್ ಹೀರೋ 'ಮಹಾಕಾಳಿ' ಕಥೆ ಹೇಳಲಿದ್ದಾರೆ ಹನುಮಾನ್ ಸಿನಿಮಾ ಸಾರಥಿ

ಭಾರತದ ಮೊದಲ ಮಹಿಳಾ ಸೂಪರ್ ಹೀರೋ ‘ಮಹಾಕಾಳಿ’ ಕಥೆ ಹೇಳಲಿದ್ದಾರೆ ಹನುಮಾನ್ ಸಿನಿಮಾ ಸಾರಥಿ

ಭಾರತದ ಮೊದಲ ಮಹಿಳಾ ಸೂಪರ್ ಹೀರೋ ‘ಮಹಾಕಾಳಿ’ ಕಥೆ ಹೇಳಲಿದ್ದಾರೆ ಹನುಮಾನ್ ಸಿನಿಮಾ ಸಾರಥಿ

ಹನುಮಾನ್ ಸಿನಿಮಾ ನಿರ್ದೇಶಕರ ‘ಮಹಾಕಾಳಿ’ಗೆ ಮಹಿಳಾ ನಿರ್ದೇಶಕಿ ಸಾರಥಿ

ಹನುಮಾನ್ ಸಿನಿಮಾ ನಿರ್ದೇಶಿಸಿ ಸೈ ಎನಿಸಿಕೊಂಡಿರುವ ಪ್ರಶಾಂತ್ ವರ್ಮಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹನುಮಾನ್ 2 ಜೊತೆಗೆ ಬಾಲಯ್ಯನ ಸುಪುತ್ರ ಮೋಕ್ಷಜ್ಞರನ್ನು ಚಿತ್ರರಂಗಕ್ಕೆ ಪರಿಚಯಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇದರ ಬೆನ್ನಲ್ಲೇ ಪ್ರಶಾಂತ್ ಭಾರತದ ಮೊದಲ ಮಹಿಳಾ ಸೂಪರ್ ಹೀರೋ ಮಹಾಕಾಳಿ ಕಥೆಯನ್ನು ಹೇಳೋದಿಕ್ಕೆ ಹೊರಟಿದ್ದಾರೆ. 

ಪ್ರಶಾಂತ್ ವರ್ಮಾ ತಮ್ಮದೇ ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ನಡಿ ಮೂರನೇ ಚಿತ್ರ ಘೋಷಣೆ ಮಾಡಿದ್ದಾರೆ. ಮಹಾಕಾಳಿ ಸಿನಿಮಾಗೆ ಪ್ರಶಾಂತ್ ಕಥೆ ಬರೆದಿದ್ದು, ಆದ್ರೆ ಮಹಿಳಾ ನಿರ್ದೇಶಕಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿರುವುದು ವಿಶೇಷ. ಈ ಹಿಂದೆ ಮಾರ್ಟಿನ್ ಲೂಥರ್ ಕಿಂಗ್ ಎಂಬ ಚಿತ್ರ ನಿರ್ದೇಶಿಸಿದ್ದ ಪೂಜಾ ಅಪರ್ಣಾ ಕೊಲ್ಲೂರು ಮಹಾಕಾಳಿ ಸಾರಥ್ಯ ವಹಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳದ ಜನಪ್ರಿಯ ದೇವಿಯಾಗಿರುವ ಕಾಳಿ ಹಿನ್ನೆಲೆ, ಅಲ್ಲಿನ ನೆಲದ ಸಂಸ್ಕೃತಿಯನ್ನು ಸಿನಿಮಾ ರೂಪದಲ್ಲಿ ಕಟ್ಟಿಕೊಡಲಾಗುತ್ತದೆ. ಮಹಾಕಾಳಿ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಹುಡುಗಿಯೊಬ್ಬಳು ಹುಲಿಗೆ ತನ್ನ ಹಣೆ ಕೊಟ್ಟು ನಿಂತಿರುವ ಲುಕ್ ನ್ನು ಅನಾವರಣ ಮಾಡಲಾಗಿದೆ.



ಮಹಾಕಾಳಿ ಸಿನಿಮಾವನ್ನು ಆರ್ ಕೆಎಂಡಿ ಸ್ಟುಡಿಯೋಸ್ ಬ್ಯಾನರ್ ನಡಿ ರಿಜ್ವಾನ್ ರಮೇಶ್ ದುಗ್ಗಲ್ ನಿರ್ಮಾಣ ಮಾಡುತ್ತಿದ್ದಾರೆ. ಆರ್ ಕೆ ದುಗ್ಗಲ್ ಚಿತ್ರ ಪ್ರೆಸೆಂಟ್ ಮಾಡುತ್ತಿದೆ. ಸ್ಮರಣ್ ಸಾಯಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಮಹಾಕಾಳಿ ಸಿನಿಮಾವನ್ನು ಭಾರತ ಮಾತ್ರವಲ್ಲದೆ ಇತರ ವಿದೇಶಿ ಭಾಷೆಗಳಲ್ಲಿ ಚಿತ್ರ ಮೂಡಿ ಬರಲಿದೆ.  ಹನುಮಾನ್ ಸಿನಿಮಾ ಜಪಾನ್ ಹಾಗೂ ಇತರ ಭಾಷೆಗಳಲ್ಲಿ ಭರ್ಜರಿ ಹಿಟ್ ಕಂಡಿತ್ತು. ಶೀಘ್ರದಲ್ಲೇ ಚಿತ್ರದ ತಾರಾಬಳಗ ಹಾಗೂ ಉಳಿದ ತಾಂತ್ರಿಕ ವರ್ಗದ ಬಗ್ಗೆ ಮಾಹಿತಿ ನೀಡಲಿದೆ.

RELATED ARTICLES
- Advertisment -
Google search engine

Most Popular

Recent Comments