Monday, December 1, 2025
Google search engine
Homeಸಿನಿ ಸಮಾಚಾರ'ಜೈ ಹನುಮಾನ್'ಗೆ ರಿಷಬ್ ಶೆಟ್ಟಿ ಜೈಕಾರ... ಹನುಮಾನ್ ಪಾತ್ರದಲ್ಲಿ ಕಾಂತಾರ ಸ್ಟಾರ್

‘ಜೈ ಹನುಮಾನ್’ಗೆ ರಿಷಬ್ ಶೆಟ್ಟಿ ಜೈಕಾರ… ಹನುಮಾನ್ ಪಾತ್ರದಲ್ಲಿ ಕಾಂತಾರ ಸ್ಟಾರ್

‘ಜೈ ಹನುಮಾನ್’ಗೆ ರಿಷಬ್ ಶೆಟ್ಟಿ ಜೈಕಾರ… ಹನುಮಾನ್ ಪಾತ್ರದಲ್ಲಿ ಕಾಂತಾರ ಸ್ಟಾರ್

ಮತ್ತೊಂದು ಮೈಲಿಗಲ್ಲು ಸೃಷ್ಟಿಸಲು ಡಿವೈನ್ ಸ್ಟಾರ್ ರೆಡಿ.. ಹನುಮಾನ್ ಪಾತ್ರದಲ್ಲಿ ರಿಷಬ್ ಮೋಡಿ

ಪ್ರಶಾಂತ್ ವರ್ಮಾ ಜೈ ಹನುಮಾನ್ ಗೆ ರಿಷಬ್ ಶೆಟ್ಟಿ ಜೈಕಾರ..ದೀಪಾವಳಿ ವಿಶೇಷವಾಗಿ ಫಸ್ಟ್ ಲುಕ್ ರಿಲೀಸ್

ಕಾಂತಾರ ಕಣಕ್ಕಿಳಿದಿರುವ ಕಾಡುಬೆಟ್ಟ ಶಿವನ ಲುಕ್ಕು-ಗೆಟಪ್ಪು ಕಣ್ತುಂಬಿಕೊಳ್ಳೋದಿಕ್ಕೆ ಅಖಂಡ ಸಿನಿಮಾಪ್ರೇಮಿಗಳು ಕಾತರದಿಂದ ಕಾಯ್ತಿದ್ದಾರೆ. ಕುಂದಾಪುರದ ಕೆರಾಡಿ ಹುಡ್ಗ ಕಾಂತಾರ ಪ್ರೀಕ್ವೆಲ್ ಮೂಲಕ ಕದಂಬರ ಕಥೆ ಹರವಿಡೋದಿಕ್ಕೆ ಹೊರವಿಡುವುದು ಜೊತೆಗೆ ಪುರಾತನ ಸಮರ ಕಲೆ ಕಳರಿಪಯಟ್ಟು ಕಲೆಯನ್ನ ಕಟ್ಟಿಕೊಡಲು ಕಸರತ್ತು ನಡೆಸಿದ್ದಾರೆ. ಡಿವೈನ್ ಸ್ಟಾರ್ ಚಿತ್ತವೀಗ ಕಾಂತಾರ 1 ಸಿನಿಮಾ ಮೇಲಿದೆ. ಮೋಹನ್ ಲಾಲ್ ಸೇರಿದಂತೆ ಒಂದಷ್ಟು ಪರಭಾಷಾ ನಟರು ಕಾಂತಾರ ಪ್ರೀಕ್ವೆಲ್ ಕಣಕ್ಕಿಳಿಯಲಿದ್ದಾರೆ ಎಂದ ಸಂದೇಶ ರವಾನೆಯಾಗಿರುವ ಹೊತ್ತಲ್ಲಿ ರಿಷಬ್ ತೆಲುಗಿನ ಜೈ ಹನುಮಾನ್ ಗೆ ಜೈಕಾರ ಹಾಕಿದ್ದಾರೆ.

ಟಾಲಿವುಡ್ ಅಂಗಳದಲ್ಲಿ ಮೂಡಿಬಂದಿದ್ದ ಜೈ ಹನುಮಾನ್ ಸಿನಿಮಾ ಪ್ಯಾನ್ ಇಂಡಿಯಾದಾದ್ಯಂತ ಬಾಕ್ಸ್ ಆಫೀಸ್ ಬೇಟೆಯಾಡಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡಿದ್ದ ಹನುಮಾನ್ ಸಿನಿಮಾದ ಸೀಕ್ವೆಲ್ ಮೂಡಿಬರ್ತಿದ್ದು. ಇದೀಗ ಪ್ಯಾನ್‌‌ಇಂಡಿಯಾ ಹಿಟ್ ಸೀಕ್ವೆಲ್‌‌ನಲ್ಲಿ ಕಾಂತಾರ ಶಿವ ನಟಿಸುವುದು ಅಧಿಕೃತವಾಗಿದೆ. ನಿರ್ದೇಶಕ ಪ್ರಶಾಂತ್ ವರ್ಮಾ ಡೈರೆಕ್ಷನ್ ಅಡಿಯಲ್ಲಿ ಮೂಡಿಬರ್ತಿರುವ ಹನುಮಾನ್ ಸಿನಿಮಾದ ಸೀಕ್ವೆಲ್ ನಲ್ಲಿ ರಿಷಬ್ ಶೆಟ್ಟಿ ಹನುಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು. ದೀಪಾವಳಿಯ ವಿಶೇಷ ಸಂದರ್ಭದಲ್ಲಿ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ.

ನಿರ್ದೇಶಕ ಪ್ರಶಾಂತ್ ವರ್ಮಾ ಜೈ ಹನುಮಾನ್ ಚಿತ್ರದ ಸೀಕ್ವೆಲ್ ನಲ್ಲಿ ‘ಹನುಮಾನ್’ ಪಾತ್ರಧಾರಿಗೆ ಬಹಳಷ್ಟು ಅಳೆದೂ ತೂಗಿ ಕಾಂತಾರ ಸೃಷ್ಟಿಕರ್ತ ರಿಷಬ್ ಶೆಟ್ಟಿ ಅವರನ್ನು ಆಯ್ಕೆ ಮಾಡಿದ್ದಾರೆ. ಕಾಂತಾರ ಸೀಕ್ವೆಲ್ ಗಾಗಿ ನ್ಯಾಷನಲ್ ಅವಾರ್ಡ್ಸ್ ಮುಡಿಗೇರಿಸಿಕೊಂಡಿರುವ ಡಿವೈನ್ ಸ್ಟಾರ್ ಕೇವಲ ನಟರಾಗಿ ಅಷ್ಟೇ ಅಲ್ಲದೆ. ನಿರ್ದೇಶಕರಾಗಿಯೋ ಪ್ಯಾನ್ ಇಂಡಿಯಾದಾದ್ಯಂತ ಮೋಡಿ ಮಾಡಿದ್ದಾರೆ. ಇದೆ ಕಾರಣಕ್ಕೆ ಯಾವುದೇ ಪಾತ್ರವನ್ನಾದರೂ ಕಾಡುಬೆಟ್ಟ ಶಿವ ಸಮರ್ಥವಾಗಿ ನಿಭಾಯಿಸಬಲ್ಲರು. ಜೊತೆಗೆ, ಕಥೆ-ಚಿತ್ರಕಥೆ ಹಾಗೂ ಸಂಭಾಷಣೆ ವಿಭಾಗಗಳಲ್ಲೂ ರಿಷಬ್ ಶೆಟ್ಟಿಗೆ ಕಂಟ್ರೋಲ್ ಇರೋದ್ರಿಂದ. ಹನುಮಾನ್ ಸಿನಿಮಾದ ಸೀಕ್ವೆಲ್ ಗೆ ಪ್ಲಸ್ ಪಾಯಿಂಟ್ಸ್ ಹಾಗೋ ಸಾಧ್ಯತೆ ಇದೆ.. ಈ ಎಲ್ಲಾ ವಿಷಯಗಳನ್ನ ಹೊರತು ಪಡಿಸಿ ನೋಡುವದಾದರೆ, ರಿಷಬ್ ಶೆಟ್ಟಿ ಅವರನ್ನ ಜೈ ಹನುಮಾನ್ ಸೀಕ್ವೆಲ್ ನಲ್ಲಿ ನಾಯಕರನ್ನಾಗಿ ಮಾಡಿಕೊಂಡರೆ ಬಹಳಷ್ಟು ಲಾಭವಿದೇ,.ಪ್ರಪಂಚದಾದ್ಯಂತ ಅಪಾರವಾದ ಅಭಿಮಾನಿಗಳನ್ನ ಹೊಂದಿರೋ ಡಿವೈನ್ ಸ್ಟಾರ್  ಕ್ರೇಜ್ ನ ಉಪಯೋಗಿಸಿಕೊಳ್ಳಬಹುದು ಎಂಬುದು ಜೈ ಹನುಮಾನ್ ಚಿತ್ರತಂಡದ ಪ್ಲ್ಯಾನ್ ಹಾಕಿ ಜೈ ಹನುಮಾನ್ ಸಿನಿಮಾ ಕಣಕ್ಕೆ ಅವರನ್ನು ಇಳಿಸಿದೆ.


ಕೈಯಲ್ಲಿ ರಾಮನ ವಿಗ್ರಹ ಹಿಡಿದು ರಿಷಬ್ ಶೆಟ್ಟಿ ಹನುಮಾನ್ ವೇಷದಲ್ಲಿ ಪವರ್ ಫುಲ್ ಪೋಸ್ಟ್ ಕೊಟ್ಟಿದ್ದಾರೆ, ಫಸ್ಟ್ ಲುಕ್ ಪೋಸ್ಟರ್ ಬಹಳ ಆಕರ್ಷಕವಾಗಿದೆ. ಜೈ ಹನುಮಾನ್ ಸಿನಿಮಾವನ್ನು  ಪ್ರಶಾಂತ್ ವರ್ಮಾ ಸಿನಿಮಾಟಿಕ್ ಯೂನಿವರ್ಸ್ (PVCU) ನ ಭಾಗವಾಗಿ ತಯಾರಾಗಲಿದೆ. ನವೀನ್ ಯೆರ್ನೇನಿ ಮತ್ತು ವೈ ರವಿ ಶಂಕರ್ ಭಾರೀ ಬಜೆಟ್ ನಲ್ಲಿ ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ನಡಿ ಜೈ ಹನುಮಾನ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments

Swarupa Sandarshan - WordPress Downloads -
Deneme Bonusu Veren Siteler +750 TL Ekim 2025 - Güvenilir bahis siteleri Ekim 2025 - En Popüler Slot Oyunları Ekim 2025: Guns N’ Roses oyunu
Casino Sites October 2025: Trusted Online Casino - Betting Sites October 2025: Trusted Live Betting - Top Slot Games October 2025: Guns N’ Roses play