Monday, December 1, 2025
Google search engine
Homeಸಿನಿ ಸಮಾಚಾರದಿವಂಗತ ನಟಿ ಶ್ರೀದೇವಿಯವರ ೬೧ನೇ ಜನ್ಮದಿನೋತ್ಸವದ ಸವಿ ನೆನಪಿಗಾಗಿ ಮಲಾನಿಯವರಿಂದ ಗೌರವಪೂರ್ವಕ ಕಾವ್ಯವಾಚನ.

ದಿವಂಗತ ನಟಿ ಶ್ರೀದೇವಿಯವರ ೬೧ನೇ ಜನ್ಮದಿನೋತ್ಸವದ ಸವಿ ನೆನಪಿಗಾಗಿ ಮಲಾನಿಯವರಿಂದ ಗೌರವಪೂರ್ವಕ ಕಾವ್ಯವಾಚನ.

ದಿವಂಗತ ನಟಿ ಶ್ರೀದೇವಿಯವರ ೬೧ನೇ ಜನ್ಮದಿನೋತ್ಸವದ ಸವಿ ನೆನಪಿಗಾಗಿ ಮಲಾನಿಯವರಿಂದ ಗೌರವಪೂರ್ವಕ ಕಾವ್ಯವಾಚನ.

ದಿವಂಗತ ನಟಿ ಶ್ರೀದೇವಿಯವರ ೬೧ನೇ ಜನ್ಮದಿನೋತ್ಸವದ ಸವಿ ನೆನಪಿಗಾಗಿ ಮಲಾನಿಯವರಿಂದ ಗೌರವಪೂರ್ವಕ ಕಾವ್ಯವಾಚನ.

ಎಲ್ಲರಿಗೂ ತಿಳಿದಿರುವಂತೆ ಸಂದೀಪ್ ಮಲಾನಿಯವರು ನಟಿ ಶ್ರೀದೇವಿಯವರ ಕಟ್ಟಾ ಅಭಿಮಾನಿ ಅಥವಾ ಅದಕ್ಕಿಂತಲೂ(ಅವರೇ ಹೇಳಿಕೊಳ್ಳುವಂತೆ ಶ್ರೀದೇವಿಯವರ ಭಕ್ತ) ಹೆಚ್ಚು. ಶ್ರೀದೇವಿಯವರ ಚಿತ್ರಜೀವನವನದ ನಡೆಯನ್ನು ಬಹುಕಾಲದಿಂದಲೂ ಅನವರತ ಹಿಂಬಾಲಿಸಿಕೊಂಡು, ಆಚರಿಸಿಕೊಂಡು, ಅವರ ಸಿನಿಮಾಗಳ ಯಶಸ್ಸಿಗೆ ತನ್ನ ಕೈಲಾದ ಅಳಿಲು ಸೇವೆಯನ್ನು ನೀಡುತ್ತಾ ಬಂದವರು. ಪ್ರತೀ ವರ್ಷ ಆಗಸ್ಟ್ ೧೩ ರಂದು ಬರುವ ಶ್ರೀದೇವಿಯವರ ಜನ್ಮದಿನವನ್ನು ತನ್ನದೇ ವಿಶಿಷ್ಠ ರೀತಿಯಲ್ಲಿ ಆಚರಿಸಿಕೊಂಡು ಬಂದವರು. ಹಲವು ವರ್ಷಗಳ ಹಿಂದೆ ಈ ದಿನ ಶ್ರೀದೇವಿಯವರು ಬಾಲ್ಯದಲ್ಲಿ ಕುಟುಂಬದ ಜೊತೆಗಿದ್ದ ಫೋಟೋ, ಅವರ ಸಿನಿಮಾಗಳ ಪೋಸ್ಟರ್ ಗಳನ್ನೆಲ್ಲಾ ಕೊಲಾಜ್ ಮಾದರಿಯಲ್ಲಿ ಶೇಖರಿಸಿಟ್ಟ ಫೋಟೋ, ಅವರ ಜೀವನದ ಘಟನೆಗಳನ್ನು ದಾಖಲೀಕರಿಸಿದ ಡೈರಿ, ಅವರ ಸಿನಿಮಾ ಜೀವನದ ಸಂಗೀತಮಯ ಪ್ರಸ್ತುತಿಯ ವಸ್ತು ಚಿತ್ರ ಹೀಗೆ ಪ್ರತಿ ವರ್ಷವೂ ಒಂದಿಲ್ಲೊಂದು ಸ್ಮರಣಿಕೆಗಳನ್ನು ಉಡುಗೊರೆಯನ್ನಾಗಿ‌ ನೀಡಿದವರು. ಈ ಹಿಂದೆ ಶ್ರೀದೇವಿಯವರಿಗೆ ಅರ್ಪಿಸಿ ‘ಜಾನ್ ಲೇವಾ 555’ ಎಂಬ‌ ಹಿಂದಿ‌‌ ಸಿನಿಮಾ ನಿರ್ದೇಶಿಸಿದರು. ಅದರಲ್ಲಿನ‌ ನಾಯಕಿ ಕಲ್ಪನಾ ಪಂಡಿತ್ ರವರು ನಗೀನಾ, ನಿಗಾಹೇಂ, ಚಾಲ್ ಬಾಜ಼್, ಚಾಂದಿನಿ ಮತ್ತಿತರ ಸಿನಿಮಾಗಳಲ್ಲಿ ಧರಿಸಿದ್ದ ಉಡುಪುಗಳನ್ನೇ ಧರಿಸಿದ್ದರು. ಆ ಸಿನಿಮಾ ಕೂಡಾ ಶ್ರೀದೇವಿಯವರ ನಗೀನಾ, ನಿಗಾಹೇಂ ಸಿನಿಮಾಗಳ ಸ್ಫೂರ್ತಿಯಲ್ಲೇ ತಯಾರಿಸಿದ ಸಿನಿಮಾವಾಗಿತ್ತು. ಮಲಾನಿಯವರು ಈ ಹಿಂದೆ ಐಫೋನಲ್ಲಿ ಚಿತ್ರೀಕರಿಸಿದ ‘ಮಾ ಯೇ ಸಿನಿಮಾ ಹೇ’ ಚಿತ್ರವೂ ಕೂಡಾ ಶ್ರೀದೇವಿಯವರ ಹಲವು‌‌ ಸಿನಿಮಾಗಳ ಹಾಡು, ದೃಶ್ಯಗಳಿಂದ ಪ್ರೇರೇಪಿತಗೊಂಡಿದ್ದು ಹಲವರ ಮೆಚ್ಚುಗೆ ಗಳಿಸಿತ್ತು. ಅವರ ಇತ್ತೀಚಿನ ನಿರ್ದೇಶನದ ‘ರಂಗ್ ಭರೇ ಬಾದಲ್ ಸೇ’ (ಇದೂ ಕೂಡಾ ಶ್ರೀದೇವಿಯವರ ಚಾಂದಿನಿ ಸಿನಿಮಾದಲ್ಲಿ ಸ್ವತಃ ನಟಿಯೇ ಹಾಡಿದ ಹಾಡೊಂದರ ಮೊದಲ ಸಾಲು). ಈ‌ ಸಿನಿಮಾವನ್ನು ಕೂಡಾ ಮಲಾನಿಯವರು ಅಗಲಿದ ಅವರ ನೆಚ್ಚಿನ ನಟಿ ಶ್ರೀದೇವಿಯವರಿಗೆ ಸಮರ್ಪಿಸಿದ್ದು ಅವರ ಅಭಿನಯದ ಸಿನಿಮಾಗಳನ್ನು‌ ಉಲ್ಲೇಖಿಸಿ ಒಂದು ಕವಿತೆಯನ್ನು ವಾಚಿಸಿದ್ದಾರೆ.

ಈ‌ ಸಿನಿಮಾವನ್ನು “ಅಶ್ಮಿತಾ ಮತ್ತು ಅಮಿಷಾ ಫಿಲಂಸ್” ಲಾಂಛನದಲ್ಲಿ ಶ್ರೀ ರಾಜೇಶ್ ಚೌಧುರಿಯವರು‌ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಸಂದೀಪ್ ಮಲಾನಿಯವರ ಹೊರತಾಗಿ‌ ತೆಲುಗು, ಕನ್ನಡ, ಕೊಂಕಣಿ ಹೀಗೆ ಬಹುಭಾಷಾ ನಟಿಯಾದ, ಪ್ರಶಸ್ತಿ ವಿಜೇತ ನಟಿ ಎಸ್ತರ್ ನೊರೊನ್ಹಾ ನಾಯಕಿಯಾಗಿಯೂ, ಇಂಡಿಯನ್ ಐಡಲ್ ಫೈನಲಿಸ್ಟ್ ಗಾಯಕ ನಿಹಾಲ್ ತಾವ್ರೋ, ಬಿಗ್ ಬಾಸ್ ಕನ್ನಡದ ಸ್ಪರ್ಧಿಯಲ್ಲೊಬ್ಬರಾದ ಉದಯ್ ಸೂರ್ಯ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರಲ್ಲದೆ ಅಶ್ವಿನ್ ಡಿಕೋಸ್ಟ (ಅಸ್ಮಿತಾಯ್ ಖ್ಯಾತಿಯ), ಗಾಡ್ವಿನ್ ಸ್ಪಾರ್ಕಲ್, ರಾಜೀವ್ ಪಿಳ್ಳೈ, ಜೋಸಿತಾ ಅನೋಲಾ, ಅನಿತಾ ದುಲಮ್, ಸೀಮಾ ಬುತೆಲ್ಲೋ, ಹರೇರಾಮ್ ಠಾಕೂರ್, ಸೌಜನ್ಯ ಹೆಗ್ಡೆ, ವೆಲೆರಿಯನ್ ಮೆನೆಜಸ್, ಮಂಜುಳಾ ಪಿಳ್ಳೈ, ಜಿಗರ್ ಚನಾನಾ, ತಿರುಮಲೇಶ್, ಪ್ರೀತಿ, ಅಶ್ಮಿತಾ, ಚೌಧುರಿ, ಅಮಿಷಾ ಚೌಧುರಿ ಹಾಗೂ ಕನ್ನಡ ಸಿನಿಮಾದ ಜನಪ್ರಿಯ ನಟಿ ಜಯಲಕ್ಷ್ಮಿ ಮತ್ತು ಕೊಂಕಣಿ ನಟಿ ಮೀನಾ ಮಲಾನಿಯವರು ಅಭಿನಯಿಸಿದ್ದಾರೆ.

ಈ ಚಿತ್ರಕ್ಕೆ ವೀರ್ ಸಮರ್ಥ್, ಪ್ಯಾಟ್ಸನ್ ಪೀರೇರಾ ಮತ್ತು ರಾಹುಲ್ ರಾಜ್ ರವರ ಸಂಗೀತವಿದ್ದು ಸೆಲ್ವಂ ಛಾಯಾಗ್ರಹಣವಿದೆ. ಸಂತೋಷ್ ಚಾವ್ಲಾ ಮತ್ತು ಸಿಲ್ವರ್ ಮಲಾನಿಯವರು ಸಹ ನಿರ್ದೇಶನ‌ ಮಾಡಿದರೆ ಕತೆ, ಚಿತ್ರಕತೆ ಬರೆದು ಸಂದೀಪ್ ಮಲಾನಿಯವರು ಈ‌ ಸಿನಿಮಾವನ್ನು‌ ನಿರ್ದೇಶಿಸಿದ್ದಾರೆ. ಈ ಸಿನಿಮಾ ಹಿಂದಿ ಭಾಷೆಯ ಜೊತೆಜೊತೆಗೇ ಕನ್ನಡದಲ್ಲಿ ‘ಹೀಗೇಕೆ ನೀ ದೂರ ಹೋಗುವೆ’ ಎಂಬ ಹೆಸರಿನಲ್ಲೂ ತಯಾರಾಗಿದೆ. ಜೊತೆಗೆ ಕರಾವಳಿಯ ಭಾಷೆಗಳಾದ ಕೊಂಕಣಿಯಲ್ಲಿ ‘ಮೊಗ್ ತುಜೊ಼ ಕಿತ್ಲೋ ಆಶೆಲೋನ್’ ಎಂದೂ ತುಳು ಭಾಷೆಯಲ್ಲಿ ‘ಮೋಕೆದ ಸಿಂಗಾರಿ ಉಂತುದೆ ವೈಯ್ಯಾರಿ’ ಎಂಬ ಹೆಸರಿನಲ್ಲೂ ತಯಾರಾಗಿದ್ದು ಸದ್ಯದಲ್ಲೇ ಬಿಡುಗಡೆಯಾಗಲಿದೆ.

ಕವಿತೆಯ‌ ಲಿಂಕ್ ಇಲ್ಲಿದೆ:
https://www.youtube.com/watch?v=pSIFIHxzV3c

RELATED ARTICLES
- Advertisment -
Google search engine

Most Popular

Recent Comments

Swarupa Sandarshan - WordPress Downloads -
Deneme Bonusu Veren Siteler +750 TL Ekim 2025 - Güvenilir bahis siteleri Ekim 2025 - En Popüler Slot Oyunları Ekim 2025: Guns N’ Roses oyunu
Casino Sites October 2025: Trusted Online Casino - Betting Sites October 2025: Trusted Live Betting - Top Slot Games October 2025: Guns N’ Roses play