Monday, June 16, 2025
Google search engine
HomeSportಎನ್ 1 ಕ್ರಿಕೆಟ್ ಅಕಾಡೆಮಿಯ ವತಿಯಿಂದ ಹೊಸ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ…

ಎನ್ 1 ಕ್ರಿಕೆಟ್ ಅಕಾಡೆಮಿಯ ವತಿಯಿಂದ ಹೊಸ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ…

ಎನ್ 1 ಕ್ರಿಕೆಟ್ ಅಕಾಡೆಮಿಯ ವತಿಯಿಂದ ಹೊಸ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ...

ಎನ್ 1 ಕ್ರಿಕೆಟ್ ಅಕಾಡೆಮಿಯ ವತಿಯಿಂದ ಹೊಸ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ… IPT 12 ಕ್ರಿಕೆಟ್ ಟ್ರೋಫಿ ಹಾಗೂ ಜೆರ್ಸಿ ಅನಾವರಣ…

ಕಿರುತೆರೆ ಕಲಾವಿದರಿಗಾಗಿ TPL-ಟೆಲಿವಿಷನ್ ಪ್ರೀಮಿಯರ್ ಲೀಗ್ ಎಂಬ ಕ್ರಿಕೆಟ್ ಟೂರ್ನಮೆಂಟ್ ನಡೆಸಿಕೊಂಡು ಬರುತ್ತಿರುವ ‘ಎನ್ 1’ ಕ್ರಿಕೆಟ್ ಅಕಾಡೆಮಿಯು ಇದೀಗ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿದೆ. ಈಗಾಗಲೇ ಯಶಸ್ವಿಯಾಗಿ ಮೂರು TPL ಸೀಸನ್ ಮುಗಿಸಿರುವ ಎನ್ 1 ಅಕಾಡೆಮಿ ಸೂತ್ರಧಾರ ಸುನಿಲ್ ಕುಮಾರ್ ಬಿ. ಆರ್ ಅವರು ಈಗ IPT12 ಎಂಬ ಹೊಸ ಕ್ರಿಕೆಟ್ ಟೂರ್ನಮೆಂಟ್ಗೆ ಚಾಲನೆ ಕೊಟ್ಟಿದ್ದಾರೆ.

ಡಾಕ್ಟರ್ಸ್, ಲಾಯರ್ಸ್, ಸಿನಿಮಾ ನಟರು, ಕಿರುತೆರೆ ಕಲಾವಿದರು, ಮಾಧ್ಯಮದವರು, ಫ್ಯಾಷನ್ ಡಿಸೈನರ್ ಹೀಗೆ ಎಲ್ಲಾ ಕ್ಷೇತ್ರದವರು ಸೇರಿ ಆಡಲಿರುವ ಕ್ರಿಕೆಟ್ ಟೂರ್ನಮೆಂಟ್ IPT12 ಇದಾಗಿದೆ. ಈ ಪಂದ್ಯಾವಳಿಯ ಟ್ರೋಫಿ ಹಾಗೂ ಜೆರ್ಸಿ ಬಿಡುಗಡೆ ಮಾಡಲಾಯಿತು,. ಬೆಂಗಳೂರಿನ ಎಂಎಂ ಲೆಗಸಿಯಲ್ಲಿ ಈ ಕಾರ್ಯಕ್ರಮ ನಡೆಯಿತು. ಪ್ರಣಮ್ ದೇವರಾಜ್, ಶರಣ್ಯ ಶೆಟ್ಟಿ ಸೇರಿದಂತೆ ಚಿತ್ರರಂಗದ ಕಲಾವಿದರು, ಎಲ್ಲಾ ತಂಡದ ನಾಯಕರು ಮತ್ತು ಬ್ರ್ಯಾಂಡ್ ಅಂಬಾಸಿಡರ್ ಗಳು ಕಾರ್ಯಕ್ರಮಕ್ಕೆ ಮೆರಗು ನೀಡಿದರು.

ಬಳಿಕ ಮಾತನಾಡಿದ ನಟ ಪ್ರಣಂ ದೇವರಾಜ್ ಮಾತನಾಡಿ, ಸುನಿಲ್ ಅವರು ಪ್ರತಿ ವರ್ಷ ಈ ರೀತಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿಕೊಂಡು ಬರುತ್ತಿದ್ದಾರೆ. ನಾವು ಮಾಧ್ಯಮದರು ಒಟ್ಟಿಗೆ ಕ್ರಿಕೆಟ್ ಆಡುವ ಅವಕಾಶ ಮಾಡಿಕೊಟ್ಟಿದ್ದಾರೆ. ಸಾಕಷ್ಟು ತಂಡಗಳು ಆಡುತ್ತಿದ್ದಾರೆ. ನಮ್ಮ ದೇಶದಲ್ಲಿ ಜನರನ್ನು ಒಂದು ಮಾಡಲು ಕ್ರಿಕೆಟ್ ಹಾಗು ಸಿನಿಮಾದಿಂದ ಮಾತ್ರ ಸಾಧ್ಯ. ಕ್ರಿಕೆಟ್ ನಿಂದ ಸುನಿಲ್ ನಮ್ಮನ್ನೆಲ್ಲಾ ಒಂದು ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಎನ್ 1 ಕ್ರಿಕೆಟ್ ಅಕಾಡೆಮಿ ಸಂಸ್ಥಾಪಕ ಸುನಿಲ್ ಕುಮಾರ್ ಬಿ ಆರ್ , ಎಲ್ಲಾ ತಂಡಗಳಿಗೂ ಆಲ್ ದಿ ಬೆಸ್ಟ್ ತಿಳಿಸಿದರು.

ಯಾವ ಯಾವ ತಂಡಗಳಿವೆ?
1.GLR ವಾರಿಯರ್ಸ್
ಲೂಸ್ ಮಾದ ಯೋಗಿ -ನಾಯಕ
ರಾಜೇಶ್.ಎಲ್-ಮಾಲೀಕರು

  1. ಅಶ್ವಸೂರ್ಯ ರೈಡರ್ಸ್
    ಹರ್ಷ ಸಿಎಂ ಗೌಡ – ನಾಯಕ
    ರಂಜಿತ್ ಕುಮಾರ್ ಎಸ್ – ಮಾಲೀಕರು

3.ದಿ ಬುಲ್ ಸ್ಕ್ವಾಡ್
ಶರತ್ ಪದ್ಮನಾಭ್- ನಾಯಕ
ಮೋನಿಶ್- ಮಾಲೀಕರು

4.ಬಯೋಟಾಪ್ ಲೈಫ್ ಸೆವಿಯರ್ಸ್
ಅಬ್ರಾರ್ ಮೊಹಮ್ಮದ್-ನಾಯಕ
ಪ್ರಸನ್ನ ವಿ, ಡಾ.ವಿಶ್ವನಾಥ್,
ವಿನು ಜೋಸ್ -ಮಾಲೀಕರು

5.ಶ್ರೀಲಂಕಾ ಲಾಯರ್ಸ್ ಕ್ರಿಕೆಟ್
ಕುಸನ್-ನಾಯಕ
ಮನೀಶ್ ಅಧ್ಯಕ್ಷರು
ಬುವನೇಕ ಉಪಾಧ್ಯಕ್ಷ

  1. S/ o ಮುತ್ತಣ್ಣ ಮಿಡಿಯಾ ಟೀಮ್
    ಸದಾಶಿವ ಶೆಣೈ-ನಾಯಕ
    ಪುರಾತನ‌‌ ಫಿಲ್ಮಂಸ್-ಮಾಲೀಕರು
  2. ಭಾರತೀಯ ವಕೀಲರ ತಂಡ
    ಅರವಿಂದ್ ವೆಂಕಟೇಶ್ ರೆಡ್ಡಿ-ನಾಯಕ
    ಶಿಲೇಶ್ ಕುಮಾರ್ -ಮಾಲೀಕರು

8.ಫ್ಯಾಶನ್ ಮೇವರಿಕ್ಸ್
ಫಹೀಮ್ ರಾಜ-ನಾಯಕ
ಪ್ರಶಾಂತ್ ಕೆ ಎಂ-ಮಾಲೀಕರು

ಎವಿಆರ್ ಗ್ರೂಪ್ಸ್ ವತಿಯಿಂದ ಎಚ್ ವೆಂಕಟೇಶ್ ರೆಡ್ಡಿರವರು IPT12 ಕ್ರಿಕೆಟ್ ಟೂರ್ನಮೆಂಟ್ಗೆ ಟೈಟಲ್ ಸ್ಪಾನ್ಸರ್ ಮಾಡಿದ್ದಾರೆ. ಸದ್ಯ ಜೆರ್ಸಿ ಹಾಗೂ ಟ್ರೋಫಿ ಅನಾವರಣ ಮಾಡಲಾಗಿದ್ದು, ಶೀಘ್ರದಲ್ಲಿಯೇ ಪ್ರಾಕ್ಟಿಸ್ ಗಾಗಿ ತಂಡಗಳು ಬ್ಯಾಟ್ ಬಾಲು ಹಿಡಿದು ಅಖಾಡಕ್ಕೆ ಇಳಿಯಲಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments