Saturday, November 29, 2025
Google search engine
Homeಸಿನಿ ಸಮಾಚಾರಅನುಷ್ಕ ಶೆಟ್ಟಿಯ 'ಘಾಟಿ' ಫಸ್ಟ್ ಲುಕ್

ಅನುಷ್ಕ ಶೆಟ್ಟಿಯ ‘ಘಾಟಿ’ ಫಸ್ಟ್ ಲುಕ್

ಅನುಷ್ಕ ಶೆಟ್ಟಿಯ ‘ಘಾಟಿ’ ಫಸ್ಟ್ ಲುಕ್

ಅನುಷ್ಕಾ ಶೆಟ್ಟಿ, ಕ್ರಿಯೇಟಿವ್ ಡೈರೆಕ್ಟರ್ ಕ್ರಿಷ್ ಜಾಗರ್ಲಮುಡಿ, ಯೂವಿ ಕ್ರಿಯೇಷನ್ಸ್ ಪ್ರಸ್ತುತಪಡಿಸುತ್ತಿರುವ ಫಸ್ಟ್ ಫ್ರೇಮ್ ಎಂಟರ್ಟೇನ್ಮೆಂಟಿನ ಪ್ಯಾನ್ ಇಂಡಿಯಾ ಸಿನಿಮಾ ‘ಘಾಟಿ’ಯ ಗಮನಸೆಳೆಯಿವ ಫಸ್ಟ್ ಲುಕ್ ಅನಾವರಣಗೊಂಡಿದೆ.

ಕ್ವೀನ್ ಅನುಷ್ಕಾ ಶೆಟ್ಟಿಯವರು ಮತ್ತೆ ಕ್ರಿಯೇಟಿವ್ ಡೈರೆಕ್ಟರ್ ಕ್ರಿಷ್ ಜಾಗರ್ಲಮುಡಿ ಅವರೊಂದಿಗೆ ‘ಘಾಟಿ’ ಎಂಬ ಹೊಸ ಚಿತ್ರಕ್ಕೆ ಕೈಜೋಡಿಸಿದ್ದಾರೆ. UV ಕ್ರಿಯೇಷನ್ಸ್ ಪ್ರಸ್ತುತಪಡಿಸುತ್ತಿರುವ ಈ ಚಿತ್ರವನ್ನು ರಾಜೀವ್ ರೆಡ್ಡಿ ಮತ್ತು ಸಾಯಿ ಬಾಬು ಜಾಗರ್ಲಮುಡಿ ನಿರ್ಮಿಸಿದ್ದಾರೆ. ಬ್ಲಾಕ್ ಬಸ್ಟರ್ ‘ವೇದಂ’ ಯಶಸ್ಸಿನ ನಂತರ ಇದು ಅನುಷ್ಕಾ ಮತ್ತು ಕ್ರಿಷ್ ಅವರ ಎರಡನೇ‌ ಚಿತ್ರವಾಗಿದೆ. UV ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಇದು ಅನುಷ್ಕಾ ಅವರ ನಾಲ್ಕನೇ ಸಿನಿಮಾ ಎನ್ನುವುದು ವಿಶೇಷ.

ಅನುಷ್ಕಾ ಅವರ ಹುಟ್ಟುಹಬ್ಬದ ಅಂಗವಾಗಿ ಚಿತ್ರತಂಡವು ಫಸ್ಟ್ ಲುಕ್ ಪೋಸ್ಟರನ್ನು ಬಿಡುಗಡೆ ಮಾಡಿದ್ದು ರಕ್ತದೋಕುಳಿಯಲ್ಲಿ ಮಿಂದಿರುವ  ಅನುಷ್ಕಾ ಅವರು ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ. ಪೋಸ್ಟರ್‌ನಲ್ಲಿ ಅವರ ಕಠೋರ ಮುಖಭಾವ, ಹಣೆಯ ಬೊಟ್ಟು ಮತ್ತು ಭಂಗಿ ಸೇದುತ್ತಿರುವ ದೃಶ್ಯ ಅನುಷ್ಕಾ ಅವರ ಪಾತ್ರದ ಗಾಢತೆಯನ್ನು ಬಿಂಬಿಸುತ್ತಿದೆ. ನೀರು ತುಂಬಿದ ಕಣ್ಣುಗಳು ಮತ್ತು ಮೂಗಿನ ಎರಡು ಬದಿಗೆ ಹಾಕಿರುವ ನತ್ತು ಅವರ ಪಾತ್ರದ ತೀವ್ರತೆಯನ್ನು ಮತ್ತಷ್ಟು ಗಾಢವಾಗಿಸಿದೆ, ಮತ್ತು ಚಿತ್ರದಲ್ಲಿ ಅವರ ಪಾತ್ರದ ಬಗ್ಗೆ ಕುತೂಹಲ ಮೂಡಿಸಿದೆ.

ಫಸ್ಟ್ ಲುಕ್ ಪೋಸ್ಟರಿನಲ್ಲಿ ಕಾಣುವ ಪ್ರತಿ ಅಂಶವೂ ‘ಘಾಟಿ’ ಚಿತ್ರದ ಪ್ರಮುಖ ಪಾತ್ರದ ಕಠಿಣ ಜೀವನದ ವಾಸ್ತವತೆಯನ್ನು ತೋರಿಸುತ್ತದೆ ಹಾಗೂ ಕಥೆಯಲ್ಲಿ ಅನುಷ್ಕಾ ಅವರ ಪಾತ್ರದ ಉಳಿವಿಗೆ ನಿರ್ಧಯ ಕ್ರೂರತೆಯು ಅವಶ್ಯ ಎಂಬುದನ್ನು ಸ್ಪಷ್ಟಪಡಿಸುತ್ತದೆ.

‘ವಿಕ್ಟಿಮ್, ಕ್ರಿಮಿನಲ್, ಲೆಜೆಂಡ್’ ಎಂಬ ಟ್ಯಾಗ್ಲೈನ್‍‍ ಹೊಂದಿರುವ ‘ಘಾಟಿ’ ಸಾಮಾನ್ಯ ಕತೆಗಳಿಗಿಂತ ಹೆಚ್ಚಿನದ್ದನ್ನೇನನ್ನೋ ಹೇಳುವ ಭರವಸೆ ಮೂಡಿಸಿದೆ. ಮಾನವೀಯತೆ, ಜೀವನ ಹೋರಾಟ ಮತ್ತು ಮುಕ್ತಿಯ ಕುರಿತ ಕಥಾಹಂದರವ ಹೊಂದಿದೆ. ಕ್ರಿಷ್ ಅವರ ನಿರ್ದೇಶನದಲ್ಲಿ ಗಾಢವಾದ ದೃಶ್ಯಗಳ ಮೂಲಕ ಪ್ರೇಕ್ಷಕರಿಗೆ ಒಂದು ಸಸ್ಪೆನ್ಸ್‌ನಿಂದ ಕೂಡಿದ, ಮನಕಲಕುವ ಸಿನಿಮಾ ನೀಡುವ ನಿರೀಕ್ಷೆಯಿದೆ. ಇದು ಸರಿ ಮತ್ತು ತಪ್ಪಿನ ಬಗ್ಗೆ‌ ಇರುವ ಸಿನಿಮಾ ಅಲ್ಲ, ಆದರೆ ಸರಿ ತಪ್ಪುಗಳ ನಡುವಿನ ಹುಡುಕಾಟದ ಕತೆಯಾಗಿದೆ.

‘ಘಾಟಿ’ಯನ್ನು ಸಸ್ಪೆನ್ಸ್ ಮತ್ತು ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿ ಪ್ರಸ್ತುತಪಡಿಸಲಾಗುತ್ತಿದ್ದು, ಚಿತ್ರವು ಈಗ ಚಿತ್ರೀಕರಣದ ಅಂತಿಮ ಹಂತದಲ್ಲಿದೆ. ಚಿತ್ರದ ಟೀಸರ್ ಇಂದು ಮಧ್ಯಾಹ್ನ 4:05 ಕ್ಕೆ ಬಿಡುಗಡೆಯಾಗಲಿದೆ.

‘ಘಾಟಿ’ ಚಿತ್ರವನ್ನು ರಾಜೀವ್ ರೆಡ್ಡಿ, ಸಾಯಿ ಬಾಬು ಜಾಗರ್ಲಮುಡಿ ನಿರ್ಮಾಣ ಮಾಡಿದ್ದು, ನುರಿತ ತಾಂತ್ರಿಕ ತಂಡವು ಸಿನಿಮಾ ಕಟ್ಟುತ್ತಿದೆ. ಮನೋಜ್ ರೆಡ್ಡಿ ಕಟ್ಟಾಸನಿ ಛಾಯಾಗ್ರಹಣ, ನಾಗವೆಳ್ಳಿ ವಿದ್ಯಾ ಸಾಗರ್ ಸಂಗೀತ, ತೋಟಾ ತಾರ್ರಣಿ ಕಲಾ ನಿರ್ದೇಶನ ಹಾಗೂ ಚಾಣಕ್ಯ ರೆಡ್ಡಿ ತೂರುಪು ಅವರ ಸಂಕಲನ ಚಿತ್ರಕ್ಕಿದೆ. ಚಿಂತಕಿಂಡಿ ಶ್ರೀನಿವಾಸ ರಾವ್ ಅವರ ಕಥೆಗೆ ಸಾಯಿ ಮಾಧವ್ ಬುರ್ರ ಡೈಲಾಗ್ ಬರೆದಿದ್ದಾರೆ.

‘ಘಾಟಿ’ ಚಿತ್ರವನ್ನು ಪ್ರತಿ ಹಂತದಲ್ಲಿಯೂ ತಾಂತ್ರಿಕವಾಗಿ ಅತ್ಯುನ್ನತ ಮಟ್ಟದಲ್ಲಿ ದೊಡ್ಡ ಬಜೆಟ್‌ನೊಂದಿಗೆ ನಿರ್ಮಿಸಲಾಗುತ್ತಿದೆ. ಈ ಪ್ಯಾನ್ ಇಂಡಿಯಾ ಚಿತ್ರವು ತೆಲುಗು, ಕನ್ನಡ, ತಮಿಳ್, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.


ತಾರಾಗಣ: ಅನುಷ್ಕಾ ಶೆಟ್ಟಿ
ನಿರ್ದೇಶಕ: ಕ್ರಿಷ್ ಜಾಗರ್ಲಮುಡಿ
ನಿರ್ಮಾಪಕರು: ರಾಜೀವ್ ರೆಡ್ಡಿ, ಸಾಯಿ ಬಾಬು ಜಾಗರ್ಲಮುಡಿ
ಪ್ರಸ್ತುತಪಡಿಸುವವರು: ಯೂವಿ ಕ್ರಿಯೇಷನ್ಸ್
ಬ್ಯಾನರ್: ಫಸ್ಟ್ ಫ್ರೇಮ್ ಎಂಟರ್ಟೇನ್ಮೆಂಟ್
ಛಾಯಾಗ್ರಹಣ: ಮಾನೋಜ್ ರೆಡ್ಡಿ ಕಟ್ಟಾಸನಿ
ಕಲಾ ನಿರ್ದೇಶಕ: ತೋಟಾ ತಾರ್ರಣಿ
ಸಂಗೀತ ನಿರ್ದೇಶಕ: ನಾಗವೆಳ್ಳಿ ವಿದ್ಯಾ ಸಾಗರ್
ಡೈಲಾಗ್: ಸಾಯಿ ಮಾಧವ್ ಬುರ್ರ
ಕಥೆ: ಚಿಂತಕಿಂಡಿ ಶ್ರೀನಿವಾಸ ರಾವ್
ಸಂಕಲನ: ಚಾಣಕ್ಯ ರೆಡ್ಡಿ ತೂರುಪು
ಆಕ್ಷನ್ : ರಾಮ್ ಕೃಷನ್
ಪಿಆರ್‌ಓ: ಹರೀಶ್ ಅರಸು
ಮಾರ್ಕೆಟಿಂಗ್: ಫಸ್ಟ್ ಶೋ
ಪಬ್ಲಿಸಿಟಿ ಡಿಸೈನರ್: ಅನಿಲ್-ಭಾನು

RELATED ARTICLES
- Advertisment -
Google search engine

Most Popular

Recent Comments

Swarupa Sandarshan - WordPress Downloads -
Deneme Bonusu Veren Siteler +750 TL Ekim 2025 - Güvenilir bahis siteleri Ekim 2025 - En Popüler Slot Oyunları Ekim 2025: Guns N’ Roses oyunu
Casino Sites October 2025: Trusted Online Casino - Betting Sites October 2025: Trusted Live Betting - Top Slot Games October 2025: Guns N’ Roses play