Thursday, November 21, 2024
Google search engine
Homeಸಿನಿ ಸಮಾಚಾರ'ಮರ್ಯಾದೆ ಪ್ರಶ್ನೆ' ಸಿನಿಮಾದ ಎರಡನೇ ಹಾಡು‌ 'ನಾ ನಿನಗೆ, ನೀ‌ ನನಗೆ' ಈಗ ಬಿಡುಗಡೆಯಾಗಿದೆ.

‘ಮರ್ಯಾದೆ ಪ್ರಶ್ನೆ’ ಸಿನಿಮಾದ ಎರಡನೇ ಹಾಡು‌ ‘ನಾ ನಿನಗೆ, ನೀ‌ ನನಗೆ’ ಈಗ ಬಿಡುಗಡೆಯಾಗಿದೆ.

ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್ ಮತ್ತು ಹಾಡುಗಳಿಂದ ಪ್ಯಾಮಿಲಿ, ಪ್ರೆಂಡ್‌ಶಿಪ್ನಂತ ನವಿರಾದ ವಿಷಯಗಳಿರುವ ಸಿನಿಮಾ ಎಂದು ನಿರೀಕ್ಷೆ ಹುಟ್ಟಿಸಿರುವ ‘ಮರ್ಯಾದೆ ಪ್ರಶ್ನೆ’ ಸಿನಿಮಾದ ಎರಡನೇ ಹಾಡು‌ ‘ನಾ ನಿನಗೆ, ನೀ‌ ನನಗೆ’ ಈಗ ಬಿಡುಗಡೆಯಾಗಿದೆ.

ನಟ ಶರಣ್ ದನಿಯಲ್ಲಿ ಮೂಡಿಬಂದ ಈ ಸಿನಿಮಾದ ಮೊದಲ‌ ಹಾಡು ‘ಈಸಿ ಟೇಕ್ ಇಟ್ ಈಸಿ’ ಸಾಹಿತ್ಯಕ್ಕೆ‌‌‌ ಈಗಾಗಲೇ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದ್ದು, ಎರಡನೇ ಹಾಡು ‘ನಾ ನಿನಗೆ, ನೀ ನನಗೆ’ ಪೂರ್ಣಚಂದ್ರ ಮತ್ತು ತೇಜು ಬೆಳವಾಡಿ ಜೋಡಿಯ ನಡುವಿನ ಪ್ರೇಮದ ಸನ್ನಿವೇಶಗಳನ್ನು ಸೆರೆ ಹಿಡಿದಿದೆ. ಬಸವನಗುಡಿ, ಗಾಂಧಿಬಜಾರಿನಲ್ಲಿ ಚಿತ್ರಿಸಿರುವ ಈ ಹಾಡು ಬೆಂಗಳೂರಿನ ಮಿಡಲ್ ಕ್ಲಾಸ್ ಪ್ರೇಮದ ಅಚ್ಚಂತಿದೆ. ಅರ್ಜುನ್ ರಾಮು ರಾಗ ಸಂಯೋಜಿಸಿ, ಪ್ರಮೋದ್ ಮರವಂತೆ ಸಾಹಿತ್ಯ ಬರೆದಿರುವ ಈ ಹಾಡಿಗೆ ವಾಸುಕಿ ವೈಭವ್ ಮತ್ತು ಶ್ರೀಲಕ್ಷ್ಮಿ ಬೆಳ್ಮಣ್ಣು ದನಿಯಾಗಿದ್ದಾರೆ.

“ಈ ಹಾಡಿಗಾಗಿ ತುಂಬಾ ಸುಂದರವಾದ ವಿಶುವಲ್ಸ್ ಶೂಟ್ ಮಾಡಿದ್ದರು. ಅಷ್ಟೇ ಸುಂದರವಾಗಿ ಹಾಡುವ ಜವಾಬ್ದಾರಿ ನನ್ನ ಮತ್ತು ಶ್ರೀಲಕ್ಷ್ಮಿಯವರ ಮೇಲಿತ್ತು.  ನಾವಿಬ್ಬರೂ‌ ಈ ಹಾಡಿಗೆ ನ್ಯಾಯ ಒದಗಿಸಿದ್ದೇವೆ ಎಂಬ ನಂಬಿಕೆ ಇದೆ” ಎಂದು ಗಾಯಕ ವಾಸುಕಿ ವೈಭವ್ ಹೇಳಿದರು. ಈಗ ಈ ಹಾಡನ್ನು ಸಕ್ಕತ್ ಸ್ಟುಡಿಯೋ ಯ್ಯೂಟೂಬ್ ಚಾನೆಲ್ಲಿನಲ್ಲಿ ವೀಕ್ಷಿಸಬಹುದು.

ರಿಯಲಿಸ್ಟಿಕ್ ರಿವೇಂಜ್ ಡ್ರಾಮಾ ಜಾನರ್ರಿನ ‘ಮರ್ಯಾದೆ ಪ್ರಶ್ನೆ’ ಚಿತ್ರದ ತಾರಾಗಣದಲ್ಲಿ ತೇಜು ಬೆಳವಾಡಿ, ಸುನಿಲ್ ರಾವ್, ಪೂರ್ಣಚಂದ್ರ ಮೈಸೂರು, ರಾಕೇಶ್ ಅಡಿಗ, ಶೈನ್ ಶೆಟ್ಟಿ, ಪ್ರಭು ಮುಂಡ್ಕುರ್ ಇದ್ದಾರೆ. ಉಳಿದಂತೆ ಹಿರಿಯ ನಟರಾದ ನಾಗಾಭರಣ, ಪ್ರಕಾಶ್ ತುಂಭಿನಾಡು, ನಂದಗೋಪಾಲ್, ನಾಗೇಂದ್ರ ಷಾ, ರೇಖಾ ಕುಂಡಲಿಗಿ, ಶ್ರವಣ್, ಹರಿಹರನ್ ಮುಂತಾದವರು ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಐದು ಹಾಡುಗಳಿದ್ದು ಅರ್ಜುನ್ ರಾಮು ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಪ್ರಮೋದ್ ಮರವಂತೆ, ತ್ರಿಲೋಕ್ ತ್ರಿವಿಕ್ರಮ ಮತ್ತು ಪಾಶಾಬಾಯ್ ಸಾಹಿತ್ಯ ರಚಿಸಿದ್ದಾರೆ. ಸಕುಟುಂಬ ಸಮೇತ, ಗೌಳಿ ಮತ್ತು ಚಾರ್ಲಿ ಸಿನಿಮಾಗೆ ಕೆಲಸಮಾಡಿರುವ ಸಂದೀಪ್ ವೆಲ್ಲುರಿ ಈ ಸಿನಿಮಾದ ಛಾಯಾಗ್ರಾಹಕರು.

ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ವಿಜೇತ ‘ದಿ ಬೆಸ್ಟ್ ಆ್ಯಕ್ಟರ್’ ಮೈಕ್ರೋಮೂವಿ ನಿರ್ದೇಶಕ ನಾಗರಾಜ ಸೋಮಯಾಜಿ ನಿರ್ದೇಶನದ ಚಲನಚಿತ್ರವಿದು. ಈಗಾಗಲೇ ಲೂಸ್ ಕನೆಕ್ಷನ್, ಹನಿಮೂನ್ ವೆಬ್ ಸೀರೀಸ್ಗಳನ್ನು ನಿರ್ಮಿಸಿ ಸದ್ದು ಮಾಡಿದ್ದ ಆರ್‌ಜೆ ಪ್ರದೀಪಾ ಅವರ ‘ಸಕ್ಕತ್ ಸ್ಟೂಡಿಯೋ’ ಈ ಚಿತ್ರವನ್ನು ನಿರ್ಮಿಸಿದೆ. ಈ ಸಿನಿಮಾದ ಕತೆಯನ್ನು ಕೂಡ ಪ್ರದೀಪಾ ಅವರೇ ಬರೆದಿದ್ದಾರೆ. ʼಮರ್ಯಾದೆ ಪ್ರಶ್ನೆʼ ನವೆಂಬರ್ 22ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

RELATED ARTICLES
- Advertisment -
Google search engine

Most Popular

Recent Comments