ವಯನಾಡು ಭೂಕುಸಿತ ದುರಂತ ಎರಡು ಕೋಟಿ ರೂಪಾಯಿ ದೇಣಿಗೆ ನೀಡಿದ ನಟ ಪ್ರಭಾಸ್…

ಕೇರಳದ ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದಲ್ಲಿ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ. ಸತ್ತವರ ಸಂಖ್ಯೆ 400 ಕ್ಕೂ ಹೆಚ್ಚಾಗಿದೆ. ಈ ದುರಂತದಲ್ಲಿ ಅನೇಕ ಕುಟುಂಬಗಳು ಮನೆಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಸಂತ್ರಸ್ತರ ಸಹಾಯಕ್ಕೆ ಖ್ಯಾತ ನಟ ಪ್ರಭಾಸ್ ಮುಂದಾಗಿದ್ದಾರೆ. ಕೇರಳದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಎರಡು ಕೋಟಿ ರೂಪಾಯಿ ದೇಣಿಗೆ ನೀಡುವ ಮೂಲಕ ಪ್ರಭಾಸ್ ಮಾನವೀಯತೆ ಮೆರೆದಿದ್ದಾರೆ.




