ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ಅವರು ಇತ್ತೀಚಿಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸಾಧುಕೋಕಿಲ ಅವರನ್ನು ಭೇಟಿ ಮಾಡಿ, ಕನ್ನಡ ಚಲನಚಿತ್ರರಂಗಕ್ಕೆ ವಿಧಿಸಿರುವ ಸಿಸ್, ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣ ಮುಂತಾದ ವಿಷಯಗಳ ಕುರಿತು ಚರ್ಚಿಸಿದರು. ನಿರ್ಮಾಪಕರಾದ ಎಂ ಜಿ ರಾಮಮೂರ್ತಿ, ರಮೇಶ್ ಯಾದವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
