Thursday, November 21, 2024
Google search engine
Homeಸಿನಿ ಸಮಾಚಾರಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀಡಿ.ಕೆ ಶಿವಕುಮಾರ್ ಅವರಿಂದ "ತಮಟೆ" ಚಿತ್ರದ ಶೋ ರೀಲ್ ಉದ್ಘಾಟನೆ‌ .

ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀಡಿ.ಕೆ ಶಿವಕುಮಾರ್ ಅವರಿಂದ “ತಮಟೆ” ಚಿತ್ರದ ಶೋ ರೀಲ್ ಉದ್ಘಾಟನೆ‌ .

ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀಡಿ.ಕೆ ಶಿವಕುಮಾರ್ ಅವರಿಂದ “ತಮಟೆ” ಚಿತ್ರದ ಶೋ ರೀಲ್ ಉದ್ಘಾಟನೆ‌ .

ಮದನ್ ಪಟೇಲ್ ಅಭಿನಯದ ಈ ಚಿತ್ರಕ್ಕೆ ಮಯೂರ್ ಪಟೇಲ್ ನಿರ್ದೇಶನ .

ವಂದನ್ ಎಂ ನಿರ್ಮಾಣದ, ಮಯೂರ್ ಪಟೇಲ್ ಮೊದಲ ನಿರ್ದೇಶನದ ಹಾಗೂ ಮದನ್ ಪಟೇಲ್ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ “ತಮಟೆ” ಚಿತ್ರದ ಶೋ ರೀಲ್ ಅನ್ನು ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀಡಿ.ಕೆ.ಶಿವಕುಮಾರ್ ಇತ್ತೀಚೆಗೆ ಬಿಡುಗಡೆ ಮಾಡಿದರು. ನಂತರ ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಚಿತ್ರತಂಡದ ಸದಸ್ಯರು “ತಮಟೆ” ಚಿತ್ರದ  ಕುರಿತು ಮಾತನಾಡಿದರು.

ನಾನು ಟೂರಿಂಗ್ ಟಾಕೀಸ್ ನಡೆಸುತ್ತಿದೆ ಎಂದು ಮಾತು ಆರಂಭಿಸಿದ ಡಿ.ಕೆ.ಶಿವಕುಮಾರ್ ಅವರು, ನಾನು ಸಿನಿಮಾ ನೋಡಿ ಇಪ್ಪತ್ತೈದು ವರ್ಷಗಳಾಗಿದೆ. ನಮ್ಮದೇ  ಚಿತ್ರಮಂದಿರಗಳಿದ್ದರೂ ಸಹ ನಾನು ಸಿನಿಮಾ ನೋಡಿಲ್ಲ. ಎಷ್ಟೋ ದಿನಗಳ ನಂತರ  “ತಮಟೆ” ಚಿತ್ರ ದ ಶೋ ರೀಲ್ ಅನ್ನು ಇಂದು ಅರ್ಧ ಗಂಟೆ ಕಾಲ ವೀಕ್ಷಿಸಿದ್ದೇನೆ. ಚಿತ್ರ ತುಂಬಾ ಚೆನ್ನಾಗಿದೆ. ಮುಂದೆ ಸಮಯ ಸಿಕ್ಕಾಗ ಪೂರ್ತಿ ಚಲನಚಿತ್ರ ವೀಕ್ಷಿಸುತ್ತೇನೆ.‌ ಮದನ್ ಪಟೇಲ್ ಅವರು ಮೊದಲಿನಿಂದಲೂ ಪರಿಚಯ. ಅವರ ಮಗ ಮಯೂರ್ ಪಟೇಲ್ ಈ ಚಿತ್ರವನ್ನು ನಿರ್ದೇಶಿಸಿರುವ ವಿಚಾರ ತಿಳಿದು ಖುಷಿಯಾಯಿತು.  ಗ್ರಾಮೀಣ ಸೊಗಡಿನ ಹಾಗೂ “ತಮಟೆ” ವಾದ್ಯಗಾರನೊಬ್ಬನ ಜೀವನದ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಮದನ್ ಪಟೇಲ್ ಅವರು ಅಮೋಘವಾಗಿ ಅಭಿನಯಿಸಿದ್ದಾರೆ. “ತಮಟೆ” ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಹಾರೈಸಿದರು.

ನಾನು ಕೆಲವು ವರ್ಷಗಳ ಹಿಂದೆ ಈ ಕಾದಂಬರಿ ಬರೆದಿದ್ದೆ. ಈಗ ಅದನ್ನು ನನ್ನ ಮಗ ಮಯೂರ್ ಪಟೇಲ್ ನಿರ್ದೇಶನ ಮಾಡಿದ್ದಾರೆ. “ತಮಟೆ” ವಾದ್ಯಗಾರನೊಬ್ಬನ ಜೀವನ ಆಧರಿಸಿದ ಕಥೆಯಿದು. ನಾನೇ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದೇನೆ.‌ ನಾನು ಈವರೆಗೂ ಮಾಡಿರದ ಪಾತ್ರವಿದು. ಈ ಚಿತ್ರಕ್ಕೆ ಚಿತ್ರಕಥೆ ಬರೆಯುವುದರೊಂದಿಗೆ ಸಂಗೀತವನ್ನು ನೀಡಿ, ನಿರ್ಮಾಣವನ್ನು ಮಾಡಿದ್ದೇನೆ. ಈಗಾಗಲೇ ಅನೇಕ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿರುವ “ತಮಟೆ” ಚಿತ್ರವನ್ನು ಸದ್ಯದಲ್ಲೇ ಬಿಡುಗಡೆ ಮಾಡುತ್ತಿದ್ದೇವೆ. ತಮ್ಮ ಬಿಡುವಿಲ್ಲದ ಸಮಯದಲ್ಲೂ ಇಂದು ಇಲ್ಲಿಗೆ ಆಗಮಿಸಿ ಶೋ‌ ರೀಲ್ ಬಿಡುಗಡೆ ಮಾಡಿಕೊಟ್ಟ ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರಿಗೆ ಅನಂತ ಧನ್ಯವಾದ ತಿಳಿಸುತ್ತೇನೆ ಎಂದರು ಮದನ್ ಪಟೇಲ್.

ಅಪ್ಪ ಬರೆದಿರುವ “ತಮಟೆ” ಕಾದಂಬರಿಯನ್ನು ಓದುತ್ತಿದ್ದಾಗ , ಈ ಕಾದಂಬರಿಯನ್ನು ಸಿನಿಮಾ ಮಾಡುವ ಆಸೆಯಾಯಿತು. ಅಪ್ಪನ‌ ಬಳಿ ಹೇಳಿದೆ. ಅಪ್ಪ, ನೀನೇ ಈ ಚಿತ್ರವನ್ನು ನಿರ್ದೇಶನ ಮಾಡು. ನಾನು ನಿರ್ಮಾಣ ಮಾಡುತ್ತೇನೆ ಎಂದರು. ಸಿನಿಮಾದ ಮುಖ್ಯಪಾತ್ರದ ಅನ್ವೇಷಣೆಯಲ್ಲಿದ್ದಾಗ ಎಲ್ಲರೂ ಈ ಪಾತ್ರವನ್ನು ನಿಮ್ಮ ತಂದೆ ಅವರೆ ಮಾಡಿದರೆ ಚೆನ್ನಾಗಿರುತ್ತದೆ ಎಂದರು. ಅಪ್ಪ “ತಮಟೆ” ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಪ್ರತಿಭಾವಂತ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ. ನುರಿತ ತಂತ್ರಜ್ಞರು ನಮ್ಮ ಚಿತ್ರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಎಲ್ಲರ ಸಹಕಾರದಿಂದ “ತಮಟೆ” ಚಿತ್ರ ಉತ್ತಮವಾಗಿ ಮೂಡಿಬಂದಿದೆ ಎಂದರು ನಿರ್ದೇಶಕ ಮಯೂರ್ ಪಟೇಲ್. ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು ಹಾಗೂ ತಂತ್ರಜ್ಞರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments