Tuesday, June 10, 2025
Google search engine
Homeಸಿನಿ ಸಮಾಚಾರರಮಿಸುವ ರಮೆಗಳ ಮನಸ್ಸಿನ ಪ್ರೇಮಕಥೆ "ಮನೋರಮಾ" .

ರಮಿಸುವ ರಮೆಗಳ ಮನಸ್ಸಿನ ಪ್ರೇಮಕಥೆ “ಮನೋರಮಾ” .

ರಮಿಸುವ ರಮೆಗಳ ಮನಸ್ಸಿನ ಪ್ರೇಮಕಥೆ “ಮನೋರಮಾ” .

ವಿಜಯದಶಮಿಯಂದು ಬಿಡುಗಡೆಯಾಯಿತು ಕೆ.ಗುರುಸಾವನ್ ನಿರ್ದೇಶಿಸುತ್ತಿರುವ ನೂತನ ಚಿತ್ರದ ಫಸ್ಟ್ ಲುಕ್ .         
                        
ಕನ್ನಡದಲ್ಲಿ ಅನೇಕ ಪ್ರೇಮಕಥೆಗಳು ಬಂದಿದೆ. ಆದರೆ ಕನ್ನಡದಲ್ಲಿ ತೀರ ಅಪರೂಪ ಎನ್ನಬಹುದಾದ ಕಲ್ಟ್ ಲವ್ ಸ್ಟೋರಿ “ಮನೋರಮಾ” ಚಿತ್ರ ಸದ್ಯದಲ್ಲೇ ಸೆಟ್ ಏರಲಿದೆ. ವಿಜಯ ದಶಮಿಯ ಶುಭದಿನದಂದು ಈ ನೂತನ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.

ಎನ್ ಆರ್ ಐ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜೈ ಬೋಳೂರ್ ಹಾಗೂ ವೆಂಕಟ್ ಸೂರ್ಯದೇವರ ನಿರ್ಮಿಸುತ್ತಿರುವ ಈ ಚಿತ್ರವನ್ನು ಕೆ.ಗುರುಸಾವನ್ ನಿರ್ದೇಶಿಸುತ್ತಿದ್ದಾರೆ‌. ಕನ್ನಡದಲ್ಲಿ ಈಗಾಗಲೇ ಎರಡು ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕರಿಗೆ ಇದು ಮೂರನೇ ಚಿತ್ರ.       

“ಮನೋರಮಾ” ರಮಿಸುವ ರಮೆಗಳ ಮನಸ್ಸಿನ ಪ್ರೇಮಕಥೆ. ಕನ್ನಡದಲ್ಲಿ ತೀರ ಅಪರೂಪವಾದ ಕಲ್ಟ್ ಲವ್ ಸ್ಟೋರಿ. ಇದು ಒಂದು ರಾತ್ರಿಯಲ್ಲೇ ನಡೆಯವ ಪ್ರೀತಿ ಕಥಾನಕವೂ ಹೌದು. ನಮ್ಮ ಚಿತ್ರದ ಕಥೆಗೆ ಚಳಿಗಾಲದ ರಾತ್ರಿಯ ತಂಪಾದ ವಾತವರಣ ಬೇಕು. ಹಾಗಾಗಿ ನವೆಂಬರ್ ಹಾಗೂ ಡಿಸೆಂಬರ್ ನಲ್ಲಿ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ. ಇಡೀ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆಯುತ್ತದೆ. ಹಗಲು ಸನ್ನಿವೇಶಗಳಿಲ್ಲದ ಈ ಚಿತ್ರದ ಚಿತ್ರೀಕರಣ ಕೂಡ ರಾತ್ರಿಗಳಲ್ಲೇ ನಡೆಯುವುದು ವಿಶೇಷ. ಚಿತ್ರದಲ್ಲಿ ನಾಯಕ,ನಾಯಕಿ ಸೇರಿದಂತೆ ಕೇವಲ ಐದು ಪಾತ್ರಗಳು ಮಾತ್ರ ಇರುತ್ತದೆ. ಕನ್ನಡದ ಜನಪ್ರಿಯ ಚಿತ್ರಗಳಲ್ಲಿ ತಮ್ಮದೇ ಚಾಪು ಮೂಡಿಸಿರುವ ಮನು ಯು ಬಿ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ಹಿರಿಯ ನಟ ರಮೇಶ್ ಭಟ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಯಕಿ ಹಾಗೂ ಉಳಿದ ಪಾತ್ರಗಳ ಬಗ್ಗೆ ಸದ್ಯದಲ್ಲೇ ತಿಳಿಸುತ್ತೇವೆ‌. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡುತ್ತಿದ್ದಾರೆ‌. ಕೇಶವ್ ಕೋಟೇಶ್ವರ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ಹೊಸ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಿರ್ದೇಶಕ ಕೆ‌.ಗುರುಸಾವನ್.

RELATED ARTICLES
- Advertisment -
Google search engine

Most Popular

Recent Comments